ಮೊಡವೆಗಳು ಏಕೆ ಬರುತ್ತವೆ? 7 ನೈಸರ್ಗಿಕ ಮನೆಮದ್ದುಗಳು | 7 Best Home Remedies for Acne & Pimples

ಪರಿಚಯ (Introduction)

ಬೆಳಿಗ್ಗೆ ಎದ್ದ ತಕ್ಷಣ ಉತ್ಸಾಹದಿಂದ ಕನ್ನಡಿಯ ಮುಂದೆ ನಿಂತಾಗ, ಮುಖದ ಮೇಲೆ ಅನಿರೀಕ್ಷಿತವಾಗಿ ಕಾಣಿಸಿಕೊಂಡ ಆ ಒಂದು ”ಕೆಂಪು ಮೊಡವೆ” ಇಡೀ ದಿನದ ಮೂಡ್ ಹಾಳುಮಾಡಲು ಸಾಕು! ಹದಿಹರೆಯದವರಲ್ಲಿ ಇದು ಸಾಮಾನ್ಯ ಸಮಸ್ಯೆಯಾದರೂ, ಇತ್ತೀಚಿನ ಒತ್ತಡದ ಜೀವನಶೈಲಿಯಿಂದಾಗಿ ವಯಸ್ಕರನ್ನೂ ಇದು ಬಿಡುತ್ತಿಲ್ಲ.

ಮುಖದ ಅಂದವನ್ನು ಕೆಡಿಸುವುದಷ್ಟೇ ಅಲ್ಲದೆ, ನಾಲ್ಕು ಜನರ ಮುಂದೆ ಹೋಗಲು ಮುಜುಗರ ಉಂಟುಮಾಡುವ ಈ ಮೊಡವೆಗಳು ಕೇವಲ ಚರ್ಮದ ಸಮಸ್ಯೆಯಲ್ಲ; ಇದು ನಮ್ಮ ಆತ್ಮವಿಶ್ವಾಸದ ಮೇಲೂ ಪ್ರಭಾವ ಬೀರುತ್ತದೆ. ಟಿವಿಯಲ್ಲಿ ಬರುವ ಜಾಹೀರಾತು ನೋಡಿ ಸಾವಿರಾರು ರೂಪಾಯಿ ಸುರಿದು ದುಬಾರಿ ಕ್ರೀಮ್‌ಗಳನ್ನು ಹಚ್ಚಿದರೂ, ಕೆಮಿಕಲ್‌ಗಳ ಅಡ್ಡಪರಿಣಾಮದ ಭಯ ಸದಾ ಇದ್ದೇ ಇರುತ್ತದೆ.

ಆದರೆ ಚಿಂತೆ ಬೇಡ! ನಿಸರ್ಗದ ಮಡಿಲಲ್ಲೇ ಇದಕ್ಕೆ ಅದ್ಭುತ ಮದ್ದುಗಳಿವೆ. ನಮ್ಮ ಅಡುಗೆ ಮನೆಯಲ್ಲಿರುವ ಪುಟ್ಟ ಪದಾರ್ಥಗಳು ಈ ಮೊಂಡು ಮೊಡವೆಗಳನ್ನು ಮಾಯ ಮಾಡುವ ಶಕ್ತಿ ಹೊಂದಿವೆ ಎಂಬುದು ನಿಮಗೆ ತಿಳಿದಿದೆಯೇ?

“ಚರ್ಮದ ಆರೈಕೆ ಎಂದರೆ ಕೇವಲ ಹೊರಗಿನ ಮೆರುಗು ಅಲ್ಲ, ಅದು ಒಳಗಿನಿಂದ ಸಿಗುವ ನೈಸರ್ಗಿಕ ಕಾಂತಿ.”

ಈ ಲೇಖನದಲ್ಲಿ, ಮೊಡವೆಗಳು ಹೇಗೆ ಉಂಟಾಗುತ್ತವೆ ಎಂಬ ಸತ್ಯದ ಜೊತೆಗೆ, ನಿಮ್ಮ ಮುಖದ ಅಂದವನ್ನು ಮರಳಿ ತರಲು ಸಹಾಯ ಮಾಡುವ ಸರಳ ಹಾಗೂ ಪರಿಣಾಮಕಾರಿ ಮನೆಮದ್ದುಗಳ ಬಗ್ಗೆ ಸಂಪೂರ್ಣವಾಗಿ ತಿಳಿಯೋಣ. ಬನ್ನಿ, ನಿಮ್ಮ ತ್ವಚೆಯನ್ನು ನೈಸರ್ಗಿಕವಾಗಿ ಹೊಳೆಯುವಂತೆ ಮಾಡೋಣ!

ಮೊಡವೆಗಳ ಪ್ರಮುಖ ಕಾರಣಗಳು (Main Causes of Pimples / Acne)

ನಮ್ಮ ತ್ವಚೆಯ ಮೇಲೆ ಮೊಡವೆಗಳು ಮೂಡಲು ಕೇವಲ ಒಂದೇ ಕಾರಣ ಇರುವುದಿಲ್ಲ. ನಮ್ಮ ಜೀವನಶೈಲಿ ಮತ್ತು ದೇಹದ ಒಳಗಿನ ಬದಲಾವಣೆಗಳು ಇದಕ್ಕೆ ಮುಖ್ಯ ಕಾರಣ.

1.ಹಾರ್ಮೋನ್ ಬದಲಾವಣೆ (Hormonal Changes)

ವಿಶೇಷವಾಗಿ ಹದಿಹರೆಯದಲ್ಲಿ ಅಥವಾ ದೇಹದಲ್ಲಿ ಹಾರ್ಮೋನ್‌ಗಳ ಏರುಪೇರಾದಾಗ ಚರ್ಮದಲ್ಲಿ ಎಣ್ಣೆ (Sebum) ಉತ್ಪತ್ತಿ ಹೆಚ್ಚಾಗುತ್ತದೆ. ಇದು ರಂಧ್ರಗಳನ್ನು ಮುಚ್ಚಿ ಮೊಡವೆಗಳಿಗೆ ಕಾರಣವಾಗುತ್ತದೆ.

2.ಹೆಚ್ಚು ಎಣ್ಣೆಯುಕ್ತ ಚರ್ಮ (Excess Oil Production)

ಕೆಲವರಿಗೆ ಹುಟ್ಟಿನಿಂದಲೇ ಎಣ್ಣೆ ಚರ್ಮ ಇರುತ್ತದೆ (Oily Skin). ಅಂತಹವರ ಚರ್ಮಕ್ಕೆ ಧೂಳು ಮತ್ತು ಬ್ಯಾಕ್ಟೀರಿಯಾಗಳು ಬೇಗನೆ ಅಂಟಿಕೊಳ್ಳುತ್ತವೆ.ಇದು ಮೊಡವೆಗಳಿಗೆ ಕಾರಣವಾಗಬಹುದು.

3.ಪರಿಸರ ಮಾಲಿನ್ಯ ಮತ್ತು ಧೂಳಿನ ಪರಿಣಾಮ (Dirt & Pollution)

ಹೊರಗಡೆ ಸುತ್ತಾಡುವಾಗ ಮುಖದ ಮೇಲೆ ಕುಳಿತುಕೊಳ್ಳುವ ಧೂಳನ್ನು ನಾವು ಸರಿಯಾಗಿ ಸ್ವಚ್ಛ ಮಾಡದಿದ್ದರೆ, ಅದು ಮೊಡವೆಯ ರೂಪ ಪಡೆಯುತ್ತದೆ.

4.ಅನಾರೋಗ್ಯಕರ ಆಹಾರ ಪದ್ಧತಿ (Unhealthy Diet Habits)

ಅತಿಯಾದ ಎಣ್ಣೆ ಪದಾರ್ಥ, ಫಾಸ್ಟ್ ಫುಡ್,ಬೇಕರಿ ತಿಂಡಿಗಳು ಮತ್ತು ಸಕ್ಕರೆ ಅಂಶ ಹೆಚ್ಚಿರುವ ಆಹಾರಗಳು ಮೊಡವೆಯನ್ನು ಉಲ್ಬಣಗೊಳಿಸುತ್ತವೆ.

5.ಒತ್ತಡ ಮತ್ತು ನಿದ್ರೆ ಕೊರತೆ (Stress & Lack of Sleep)

ಹೌದು, ನೀವು ಸರಿಯಾಗಿ ನಿದ್ದೆ ಮಾಡದಿದ್ದರೆ ಅಥವಾ ಅತಿಯಾಗಿ ಸ್ಟ್ರೆಸ್ ಮಾಡಿಕೊಂಡರೆ ಅದರ ಮೊದಲ ಲಕ್ಷಣ ನಿಮ್ಮ ಮುಖದ ಮೇಲೆ ಕಾಣಿಸಿಕೊಳ್ಳುತ್ತದೆ.ಇದರಿಂದ ಹಾರ್ಮೋನ್ ಅಸಮತೋಲನ ಉಂಟಾಗಿ ಮೊಡವೆ ಸಮಸ್ಯೆ ಹೆಚ್ಚಾಗಬಹುದು.

6.ತಪ್ಪಾದ ಸೌಂದರ್ಯ ಉತ್ಪನ್ನಗಳು (Wrong Cosmetic Products)

ತಪ್ಪಾದ ಬ್ಯೂಟಿ ಪ್ರಾಡಕ್ಟ್‌ಗಳನ್ನು ಬಳಸುವುದರಿಂದ ಚರ್ಮಕ್ಕೆ ತೊಂದರೆ ಉಂಟಾಗಿ ಅಲರ್ಜಿ ಅಥವಾ ಮೊಡವೆಗಳು ಹೆಚ್ಚಾಗುವ ಸಾಧ್ಯತೆ ಇದೆ.

ಮನೆಯಲ್ಲೇ ಇರುವ ‘ಮ್ಯಾಜಿಕ್’ ಮದ್ದುಗಳು: ಇವುಗಳನ್ನು ಟ್ರೈ ಮಾಡಿ ನೋಡಿ!(Best Home Remedies for Pimples)

ದುಬಾರಿ ಟ್ರೀಟ್ಮೆಂಟ್ ಮಾಡುವ ಮೊದಲು ನಮ್ಮ ಅಡುಗೆ ಮನೆಯಲ್ಲಿರುವ ಈ ನೈಸರ್ಗಿಕ ಪದಾರ್ಥಗಳನ್ನು ಒಮ್ಮೆ ಪ್ರಯತ್ನಿಸಿ. ಇವು ಸುರಕ್ಷಿತ ಹಾಗೂ ಪರಿಣಾಮಕಾರಿ:

1.ಅಲೋವೆರಾ (Aloe Vera)

ಅಲೋವೆರಾ ಒಂದು ಅದ್ಭುತ ಗಿಡಮೂಲಿಕೆ. ಇದು ಮೊಡವೆಯಿಂದ ಉಂಟಾಗುವ ಕೆಂಪನ್ನು ಮತ್ತು ಉರಿಯನ್ನು ತಕ್ಷಣ ಕಡಿಮೆ ಮಾಡುತ್ತದೆ.

  • ಬಳಸುವ ವಿಧಾನ: ಗಿಡದಿಂದ ನೇರವಾಗಿ ತಾಜಾ ಜೆಲ್ ತೆಗೆದು ಮುಖಕ್ಕೆ ಹಚ್ಚಿ. 20 ನಿಮಿಷಗಳ ನಂತರ ತಣ್ಣೀರಿನಲ್ಲಿ ತೊಳೆಯಿರಿ.ದಿನಕ್ಕೆ 1 ಬಾರಿ ಬಳಸಬಹುದು.
2.ಅರಿಶಿನ ಮತ್ತು ಜೇನುತುಪ್ಪ (Turmeric & Honey)

ಅರಿಶಿನ ಬ್ಯಾಕ್ಟೀರಿಯಾಗಳನ್ನು ಕೊಂದರೆ (Anti-Bacteria), ಜೇನುತುಪ್ಪ ನಿಮ್ಮ ಚರ್ಮವನ್ನು ಮೃದುವಾಗಿರಿಸುತ್ತದೆ.

  • ಬಳಸುವ ವಿಧಾನ: ಒಂದು ಚಮಚ ಜೇನುತುಪ್ಪಕ್ಕೆ ಚಿಟಿಕೆ ಅರಿಶಿನ ಬೆರೆಸಿ ಮೊಡವೆಗಳ ಮೇಲೆ ಹಚ್ಚಿ. 15 ನಿಮಿಷ ಬಿಟ್ಟು ಮುಖ ತೊಳೆಯಿರಿ.
3.ಬೇವಿನ ಎಲೆ (Neem)

ಬೇವಿನ ಎಲೆಗಳಲ್ಲಿ ನೈಸರ್ಗಿಕ ಕ್ರಿಮಿನಾಶಕ ಗುಣಗಳಿವೆ. ಇವು ಮೊಡವೆಗೆ ಕಾರಣವಾಗುವ ಬ್ಯಾಕ್ಟೀರಿಯಾಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಇದರಿಂದ ಮೊಡವೆಗಳು ನಿಧಾನವಾಗಿ ಕಡಿಮೆಯಾಗಬಹುದು.

  • ಬಳಸುವ ವಿಧಾನ: ಬೇವಿನ ಎಲೆಗಳನ್ನು ಅರೆದು ಪೇಸ್ಟ್ ಮಾಡಿ ಮೊಡವೆಗಳ ಮೇಲೆ ಹಚ್ಚಿ. ಒಣಗಿದ ನಂತರ ತೊಳೆಯಿರಿ.
4.ಐಸ್ ಕ್ಯೂಬ್(Ice Cube)

ಮೊಡವೆಯಿಂದ ಮುಖ ಊದಿಕೊಂಡಿದ್ದರೆ ಅಥವಾ ನೋವಿದ್ದರೆ ಐಸ್ ಅದಕ್ಕೆ ರಾಮಬಾಣದಂತೆ ಕೆಲಸ ಮಾಡುತ್ತದೆ.ಇದು ಉರಿಯನ್ನು ಕಡಿಮೆ ಮಾಡಿ ಚರ್ಮವನ್ನು ತಕ್ಷಣ ಶಮನಗೊಳಿಸುತ್ತದೆ.

  • ಬಳಸುವ ವಿಧಾನ: ಒಂದು ಸ್ವಚ್ಛವಾದ ಬಟ್ಟೆಯಲ್ಲಿ(Clean Cloth) ಐಸ್ ಕ್ಯೂಬ್ ಸುತ್ತಿ ಮೊಡವೆಯ ಮೇಲೆ ಮೆಲ್ಲಗೆ 2-3 ನಿಮಿಷ ಒತ್ತಿ ಹಿಡಿಯಿರಿ.ಇದು ಊತ ಮತ್ತು ಉರಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
5.ಕಡಲೆಹಿಟ್ಟು ಮತ್ತು ಮೊಸರು ( Gram Flour & Curd)

ನಿಮ್ಮ ಮುಖದಲ್ಲಿ ಅತಿಯಾದ ಎಣ್ಣೆ ಸಮಸ್ಯೆ ಇದ್ದರೆ, ಇದು ಅತ್ಯುತ್ತಮ ನೈಸರ್ಗಿಕ ಫೇಸ್ ಪ್ಯಾಕ್. ಇದು ಹೆಚ್ಚುವರಿ ಎಣ್ಣೆಯನ್ನು ನಿಯಂತ್ರಿಸಿ ಚರ್ಮವನ್ನು ಮೃದುವಾಗಿ, ಸ್ವಚ್ಛವಾಗಿ ಮತ್ತು ತಾಜಾಗಿರಲು ಸಹಾಯ ಮಾಡುತ್ತದೆ.

  • ಬಳಸುವ ವಿಧಾನ: ಇವೆರಡನ್ನೂ ಬೆರೆಸಿ ಫೇಸ್ ಪ್ಯಾಕ್ ರೀತಿ ಹಚ್ಚಿ 15 ನಿಮಿಷ ಬಿಟ್ಟು ತೊಳೆಯಿರಿ. ಇದು ಚರ್ಮದ ಎಣ್ಣೆ ಅಂಶವನ್ನು ಹೀರಿಕೊಳ್ಳುತ್ತದೆ.
6.ಮಲ್ತಾನಿ ಮಿಟ್ಟಿ ಪ್ಯಾಕ್ (Multani Mitti Face Pack)

ನಿಮ್ಮ ಮುಖ ಅತಿಯಾಗಿ ಜಿಡ್ಡಿನಿಂದ ಕೂಡಿದ್ದರೆ ಅಥವಾ ಮುಖದ ರಂಧ್ರಗಳು ಧೂಳಿನಿಂದ ತುಂಬಿದ್ದರೆ, ಮಲ್ತಾನಿ ಮಿಟ್ಟಿ ಒಂದು ‘ಮ್ಯಾಜಿಕ್’ನಂತೆ ಕೆಲಸ ಮಾಡುತ್ತದೆ.

  • ಬಳಸುವ ವಿಧಾನ: 1 ಚಮಚ ಮಲ್ತಾನಿ ಮಿಟ್ಟಿ ಪುಡಿಗೆ ಸ್ವಲ್ಪ ಗುಲಾಬಿ ನೀರು (Rose Water) ಸೇರಿಸಿ ಕಲಸಿಕೊಳ್ಳಿ.ಕಣ್ಣಿನ ಭಾಗ ಬಿಟ್ಟು ಮುಖಕ್ಕೆ ಹಚ್ಚಿ 15-20 ನಿಮಿಷ ಒಣಗಲು ಬಿಡಿ. ನಂತರ ತಣ್ಣೀರಿನಿಂದ ಮುಖ ತೊಳೆಯಿರಿ.ವಾರಕ್ಕೆ 2 ಬಾರಿ ಬಳಸಿ.
7.ಚಂದನ (“ಶ್ರೀಗಂಧ”) || ರಕ್ತ ಚಂದನ ಪೇಸ್ಟ್ (Sandalwood || Red Sandalwood Paste)

ಚಂದನ ಮತ್ತು ರಕ್ತ ಚಂದನ ಚರ್ಮದ ಸಮಸ್ಯೆಗಳಿಗೆ ಪುರಾತನ ಕಾಲದಿಂದ ಬಳಸಲಾಗುತ್ತಿರುವ ನೈಸರ್ಗಿಕ ಪರಿಹಾರಗಳು. ಇವು ಮೊಡವೆಗಳಿಂದ ಉಂಟಾಗುವ ಕೆಂಪು ಮತ್ತು ಕಪ್ಪು ಕಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ ಹಾಗೂ ಚರ್ಮವನ್ನು ತಾಜಾ ಮತ್ತು ಸ್ವಚ್ಛವಾಗಿಡುತ್ತವೆ.

  • ಬಳಸುವ ವಿಧಾನ: ಚಂದನ ಅಥವಾ ರಕ್ತ ಚಂದನ ತುಂಡನ್ನು ಕಲ್ಲಿನ ಮೇಲೆ ಹಾಲು ಅಥವಾ ನೀರಿನೊಂದಿಗೆ ಅರೆದು ಪೇಸ್ಟ್ ತಯಾರಿಸಿ. ತುಂಡು ಲಭ್ಯವಿಲ್ಲದಿದ್ದರೆ ಶುದ್ಧ ಚಂದನ ಪುಡಿಯನ್ನು ಬಳಸಿ ಪೇಸ್ಟ್ ಮಾಡಬಹುದು. ಈ ಪೇಸ್ಟ್ ಅನ್ನು ಮುಖಕ್ಕೆ ಅಥವಾ ಮೊಡವೆ ಇರುವ ಭಾಗಕ್ಕೆ ಹಚ್ಚಿ 15–20 ನಿಮಿಷ ಬಿಟ್ಟು ನಂತರ ತಣ್ಣೀರಿನಿಂದ ತೊಳೆಯಿರಿ. ವಾರಕ್ಕೆ 2–3 ಬಾರಿ ಬಳಸಿದರೆ ಉತ್ತಮ ಫಲಿತಾಂಶ ಪಡೆಯಬಹುದು.
✔️ತ್ವಚೆಯ ಆರೋಗ್ಯಕ್ಕಾಗಿ ಈ 5 ಸೂತ್ರಗಳನ್ನು ಪಾಲಿಸಿ:(Skin Care Tips)

➤ ದಿನಕ್ಕೆ ಕನಿಷ್ಠ ಎರಡು ಬಾರಿಯಾದರೂ ಮುಖ ತೊಳೆಯಿರಿ.
➤ ಹೆಚ್ಚು ನೀರು ಕುಡಿಯಿರಿ,ಕನಿಷ್ಠ2- 3 ಲೀಟರ್.ಇದು ದೇಹದ ಕಸವನ್ನು(Toxic) ಹೊರಹಾಕುತ್ತದೆ.
➤ ಎಣ್ಣೆಯಲ್ಲಿ ಕರಿದ ತಿಂಡಿ, ಫಾಸ್ಟ್ ಫುಡ್ ಮತ್ತು ಸಕ್ಕರೆಯಿಂದ ದೂರವಿರಿ.
➤ ಸರಿಯಾದ ನಿದ್ರೆ ಪಡೆಯಿರಿ (7–8 ಗಂಟೆ)
➤ ಮುಖವನ್ನು ಅನಗತ್ಯವಾಗಿ ಸ್ಪರ್ಶಿಸುವುದನ್ನು ತಪ್ಪಿಸಿ.ಉಗುರಿನಿಂದ ಮೊಡವೆಗಳನ್ನುಅನಗತ್ಯವಾಗಿ ಸ್ಪರ್ಶಿಸುವುದನ್ನು ತಪ್ಪಿಸುವುದು ಉತ್ತಮ.

ಸಮಾಪನ (Conclusion)

ಮೊಡವೆ ಸಮಸ್ಯೆ ಸಾಮಾನ್ಯವಾದದ್ದೇ ಆದರೂ ಸರಿಯಾದ ಆರೈಕೆ ಮಾಡಿದರೆ ಅದನ್ನು ನಿಯಂತ್ರಿಸಬಹುದು. ಮೊಡವೆಗಳು ರಾತ್ರೋರಾತ್ರಿ ಮಾಯವಾಗುವುದಿಲ್ಲ; ಅದಕ್ಕೆ ಸ್ವಲ್ಪ ಸಹನೆ ಮತ್ತು ಸರಿಯಾದ ಆರೈಕೆ ಅಗತ್ಯ. ಕೆಮಿಕಲ್ ಯುಕ್ತ ಕ್ರೀಮ್‌ಗಳ ಮೇಲೆ ಅವಲಂಬಿಸದೇ, ನೈಸರ್ಗಿಕ ವಿಧಾನಗಳನ್ನು ಅನುಸರಿಸುವುದು ಚರ್ಮದ ಆರೋಗ್ಯಕ್ಕೆ ಹೆಚ್ಚು ಉಪಯುಕ್ತ. ನಿಯಮಿತ ಆರೈಕೆ, ಸಮತೋಲನ ಆಹಾರ ಮತ್ತು ಉತ್ತಮ ಜೀವನಶೈಲಿ ನಿಮ್ಮ ಚರ್ಮವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.

⚠️ ಗಮನಿಸಿ (Disclaimer)

ಇಲ್ಲಿ ನೀಡಿರುವ ಮಾಹಿತಿ ಸಾಮಾನ್ಯ ಅರಿವಿಗಾಗಿ ಮಾತ್ರ. ಮೊಡವೆ ಸಮಸ್ಯೆ ಗಂಭೀರವಾಗಿದ್ದರೆ, ಅಲರ್ಜಿ ಲಕ್ಷಣಗಳು ಕಾಣಿಸಿಕೊಂಡರೆ ಅಥವಾ ನಿಮ್ಮ ಚರ್ಮ ಅತೀ ಸಂವೇದನಶೀಲವಾಗಿದ್ದರೆ (Sensitive), ಯಾವುದೇ ಮನೆಮದ್ದು ಪ್ರಯೋಗಿಸುವ ಮೊದಲು ಚರ್ಮರೋಗ ತಜ್ಞರ (Dermatologist) ಸಲಹೆ ಪಡೆಯುವುದು ಉತ್ತಮ.

The information provided in this article is for general informational purposes only. If your acne condition is severe, if you experience any allergic reactions, or if you have highly sensitive skin, it is recommended to consult a dermatologist before trying any home remedies.

ಈ ಮಾಹಿತಿ ನಿಮಗೆ ಉಪಯುಕ್ತವೆನಿಸಿದರೆ, ದಯವಿಟ್ಟು Share ಮಾಡಿ.
ಇಂತಹ ಇನ್ನಷ್ಟು ಆರೋಗ್ಯ ಮತ್ತು ಸೌಂದರ್ಯ ಮಾಹಿತಿ ಪಡೆಯಲು ನಮ್ಮ Website ಅನ್ನು Follow ಮಾಡಿ. 🌿

Leave a Comment

Your email address will not be published. Required fields are marked *

Scroll to Top